ಸರ್ಕಾರಿ ಮಹಿಳಾ ವಸತಿ ಪಾಲಿಟೆಕ್ನಿಕ್, ಶಿವಮೊಗ್ಗ -577205 ಶಿವಮೊಗ್ಗ ಜಿಲ್ಲೆ ಸಂಸ್ಥೆಯು 1991-92 ರಲ್ಲಿ ಆರಂಭಗೊಂಡ ಕರ್ನಾಟಕದ ಏಕೈಕ ವಸತಿಯುತ ತಾಂತ್ರಿಕ ಶಿಕ್ಷಣ ಸಂಸ್ಥೆಯಾಗಿದೆ. ಈ ಸಂಸ್ಥೆಯು ತುಂಗಾನದಿಯ ತಟದಲ್ಲಿ ಹಚ್ಚಹಸಿರಿನ ಸುಂದರ ನಿಸರ್ಗದ ಮಡಿಲಿನಲ್ಲಿ 13,55,20 ಅಕ್ಷಾಂಶ ಮತ್ತು 75,34,0 ರೇಖಾಂಶವಿರುವ 14.22 ಎಕರೆ ವಿಸ್ತೀರ್ಣದ ಭೂಪ್ರದೇಶದಲ್ಲಿ 5326 ಚ.ಮೀಟರಿನ ಸುಸಜ್ಜಿತ ಕಟ್ಟಡವನ್ನು ಹೊಂದಿರುತ್ತದೆ. ವಿದ್ಯಾರ್ಥಿನಿಯರಿಗೆ ಎರಡು ಹಾಸ್ಟೆಲ್ ಕಟ್ಟಡಗಳು ನಿರ್ಮಾಣಗೊಂಡಿರುತ್ತವೆ. ಸರ್ಕಾರಿ ಮಹಿಳಾ ವಸತಿ ಪಾಲಿಟೆಕ್ನಿಕ್, ಶಿವಮೊಗ್ಗ ಸಂಸ್ಥೆಯು “ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್” [AICTE] ಇದರ ಮಾನ್ಯತೆ ಪಡೆದಿರುವ ಸರ್ಕಾರಿ ಸಂಸ್ಥೆಯಾಗಿದ್ದು, ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ಅಧೀನದಲ್ಲಿರುತ್ತದೆ. ಈ ಸಂಸ್ಥೆಯ ವಿದ್ಯಾರ್ಥಿನಿಯರಿಗೆ ಮೂರು ವರ್ಷದ ಡಿಪ್ಲೋಮಾ ಪ್ರೋಗ್ರಾಂ ಅನ್ನು ಈ ಕೆಳಗಿನ ವಿಷಯಗಳಲ್ಲಿ ನೀಡುತ್ತಿದೆ.
- ವಿದ್ಯುನ್ಮಾನ ಮತ್ತು ಸಂವಹನ ವಿಭಾಗ
- ಗಣಕಯಂತ್ರ ವಿಭಾಗ
- ಎ.ಡಿ.ಎಫ್.ಟಿ ವಿಭಾಗ
- ಕಮರ್ಷಿಯಲ್ ಪ್ರಾಕ್ಟೀಸ್ (ಕನ್ನಡ ಮತ್ತು ಇಂಗ್ಲೀಷ್)